ಪತ್ರಿಕಾ
ಪ್ರಕಟಣೆ
ಕಳ್ಳತನವಾಗಿದ್ದ
ಕೋಟ್ಯಾಂತರ ರೂಪಾಯಿ ಮೌಲ್ಯದ ಬಂಗಾರ
ನಗದು ಹಣ
ವಶ, ನಾಲ್ಕು ಜನರ ಬಂಧನ
ಚಳ್ಳಕೆರೆ ಟೌನ್ ನಲ್ಲಿ
ಕೆ.ಸಿ ತಿಪ್ಪೇಸ್ವಾಮಿ ಇವರ ಮನೆಯಲ್ಲಿ 10,70,000/- ರೂ ನಗದು ಹಣವು
ಕಳ್ಳತನವಾಗಿದ್ದು ಈ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ಮೊ.ನಂ: 399/17 ಕಲಂ: 454—457-380 ಐಪಿಸಿ
ರೀತ್ಯ ಕೇಸು ದಾಖಲಾಗಿರುತ್ತದೆ ಹಾಗೂ ಕೆ.ಸಿ ವೀರೇಂದ್ರ @ ಪಪ್ಪಿ ರವರ ಮನೆಯಲ್ಲಿಯೂ ಸಹ 21
ಕೆ.ಜಿ ಬಂಗಾರದ ಗಟ್ಟಿಗಳು ಒಟ್ಟು ಇವುಗಳ ಬೆಲೆ ಸುಮಾರು 6,30,00,000/- ರೂ ಕಳ್ಳತನವಾಗಿದ್ದು ಈ
ಬಗ್ಗೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ 401/17 ಕಲಂ: 454-457-380 ಐಪಿಸಿ ಪ್ರಕಾರ ಪ್ರಕರಣ
ದಾಖಲಾಗಿರುತ್ತದೆ. ಸದರಿ ಎರಡೂ ಪ್ರಕರಣಗಳ ಪತ್ತೆಯ ಸಂಬಂಧ
ಮಾನ್ಯ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಶ್ರೀನಾಥ್ ಎಂ. ಜೋಶಿ ಮತ್ತು ಪ್ರಭಾರ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ಲಕ್ಷ್ಮಣ್ ನಿಂಬರಗಿ ಇವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ರೋಷನ್ ಜಮೀರ್ ರವರು, ಪೊಲೀಸ್
ವೃತ್ತ ನಿರೀಕ್ಷಕರಾದ ಶ್ರೀ ತಿಮ್ಮಣ್ಣ ಎನ್. ಇವರ ನೇತೃತ್ವದಲ್ಲಿ ಪಿ.ಎಸ್.ಐ. ರವರಾದ ಶ್ರೀ ಸತೀಶ್ ನಾಯ್ಕ
ಮತ್ತು ಸಿಬ್ಬಂದಿಯವರ ತಂಡ ರಚಿಸಿದ್ದು
ಸದರಿಯವರು ದಿನಾಂಕ.15.09.2017
ರಂದು ಚಳ್ಳಕೆರೆ ಟೌನ್ ನಲ್ಲಿ ವಿಶೇಷ ಕರ್ತವ್ಯದಲ್ಲಿ ನಿರತರಾಗಿದ್ದಾಗ ಬೆಳಗಿನ ಜಾವದಲ್ಲಿ
ಯಾರೊ ಅಸಾಮಿಗಳು ಪೊಲೀಸರನ್ನು ನೋಡಿ ಓಡಿ
ಹೋಗಲು ಯತ್ನಿಸಿದವರನ್ನು ಹಿಡಿದು ಠಾಣೆಗೆ ಕರೆದುಕೊಂಡು ಬಂದು ವಿಚಾರ ಮಾಡಲಾಗಿ ಸದರಿಯವರು ನನ್ನ
ಹೆಸರು 1] ಮಂಜುನಾಥ @ ಜೆಲ್ಲಿಂಕೋಡಿ ತಂದೆ ಕುಪ್ಲು ಪಾಪಣ್ಣ 30 ವರ್ಷ. ನಾಯಕ ಜನಾಂಗ. ಕೆ.ಸಿ.
ವೀರೇಂದ್ರ @ ಪಪ್ಪಿ ರವರ ಮನೆಯಲ್ಲಿ ಕೂಲಿ ಕೆಲಸ. ಕಾಟಪ್ಪನಹಟ್ಟಿ. ಚಳ್ಳಕೆರೆ ಟೌನ್. 2]
ರಾಕೇಶ.ಕೆ. ತಂದೆ ಲೇಟ್ ಕೇಶವಚಾರಿ. 25 ವರ್ಷ. ವಿಶ್ವಕರ್ಮ ಜನಾಂಗ. ಶ್ರೀ ಜಯಲಕ್ಷ್ಮೀ ಜ್ಯೂಯಲರಿ
ಮಾಲೀಕ. ಶಾಂತಿನಗರ. ಚಳ್ಳಕೆರೆ ಟೌನ್. 3] ಸ್ವರೂಪ.ಟಿ. ತಂದೆ ದೊರೆ ಗೌಡರ ತಿಪ್ಪೇಸ್ವಾಮಿ. 28
ವರ್ಷ. ನಾಯಕ ಜನಾಂಗ. ಶ್ರೀ ಜಯಲಕ್ಷ್ಮೀ ಜ್ಯೂಯಲರಿಯಲ್ಲಿ ಕೆಲಸ. ಕಾಟಪ್ಪನಹಟ್ಟಿ. ಚಳ್ಳಕೆರೆ
ಟೌನ್, 4] ಪ್ರಹ್ಲಾದ @ ಪಾಲಯ್ಯ @ ನೆಂಗಿ ತಂದೆ ಎಂ ಕಾಟಯ್ಯ 17 ವರ್ಷ. ನಾಯಕ ಜನಾಂಗ, ಕೂಲಿ
ಕೆಲಸ, ಕಾಟಮಲಿಂಗೇಶ್ವರ ದೇವಸ್ಥಾನದ ಹತ್ತಿರ, ಕಾಟಪ್ಪನಹಟ್ಟಿ, ಚಳ್ಳಕೆರೆ ಟೌನ್ ಎಂತಾ
ತಿಳಿಸಿದರು. ನಂತರ ಮೇಲ್ಕಂಡ ಸ್ಥಳಗಳಲ್ಲಿ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡರು. ನಂತರ ಮೇಲ್ಕಂಡ
ಕೆ.ಸಿ ವೀರೇಂದ್ರ ರವರ ಮನೆಯಲ್ಲಿ ಕಳ್ಳತನವಾಗಿದ್ದ ಮೊ.ನಂ: 401/17 ಕೇಸಿನಲ್ಲಿ 1] ಮಂಜುನಾಥ @
ಜೆಲ್ಲಿಂಕೋಡಿ 2] ರಾಕೇಶ.ಕೆ. 3] ಸ್ವರೂಪ.ಟಿ. ರವರುಗಳ ಕಡೆಯಿಂದ ಕೇಸಿಗೆ ಸಂಬಂಧಿಸಿದ ಒಟ್ಟು 1
ಕೆ.ಜಿ ತೂಕದ 20 ಬಂಗಾದ ಗಟ್ಟಿಗಳು, 500 ಗ್ರಾಂ
ತೂಕದ 1 ಬಂಗಾರದ ಗಟ್ಟಿ ಇವುಗಳ ಬೆಲೆ ಒಟ್ಟು 6,15,00,000/- ರೂ ಹಾಗೂ ಕೆ.ಸಿ ತಿಪ್ಪೇಸ್ವಾಮಿ
ರವರ ಮನೆಯಲ್ಲಿ ಕಳ್ಳತನವಾಗಿದ್ದ ಮೊ.ನಂ: 399/17 ಕೇಸಿನಲ್ಲಿ 1] ಮಂಜುನಾಥ @ ಜೆಲ್ಲಿಂಕೋಡಿ 2] ಪ್ರಹ್ಲಾದ
@ ಪಾಲಯ್ಯ @ ನಿಂಗಿ ರವರ ಕಡೆಯಿಂದ 10,60,000/- ರೂ ನಗದು ಹಣವನ್ನು ವಶಪಡಿಸಿಕೊಂಡಿರುತ್ತದೆ.
ಒಟ್ಟು ಎರಡು ಪ್ರಕರಣಗಳಿಗೆ ಸಂಬಂಧಿಸಿದ 20 ಕೆಜಿ 500 ಗ್ರಾಂ ಬಂಗಾರದ ಗಟ್ಟಿಗಳು ಮತ್ತು
10,60,000/- ರೂ ನಗದು ಹಣ ಎಲ್ಲಾ ಸೇರಿ ಒಟ್ಟು 6,25,60,000/- ರೂಗಳಾಗಿರುತ್ತದೆ. ಈ ಪ್ರಕರಣಗಳಲ್ಲಿ ಆರೋಪಿತರನ್ನು ಕೇವಲ ಮೂರು ದಿನಗಳಲ್ಲಿ ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳಲು ಶ್ರಮಿಸಿದ ಚಳ್ಳಕೆರೆ ಉಪವಿಭಾಗದ ಪೊಲೀಸ್
ಉಪಾಧೀಕ್ಷಕರಾದ ಶ್ರೀ ಎಸ್. ರೋಷನ್ ಜಮೀರ್ ರವರು, ಪೊಲೀಸ್ ವೃತ್ತ
ನಿರೀಕ್ಷಕರಾದ ಶ್ರೀ ತಿಮ್ಮಣ್ಣ ಎನ್. ಇವರ ನೇತೃತ್ವದಲ್ಲಿ ಪಿ.ಎಸ್.ಐ. ರವರಾದ ಶ್ರೀ ಸತೀಶ್ ನಾಯ್ಕ. ಠಾಣೆಯ ಸಿಬ್ಬಂದಿಯವರಾದ ತಿರುಕಪ್ಪ ಟಿ, ರಂಗನಾಥ ಜಿ, ಉಮರ್ ಸಾಬ್, ಓಬಣ್ಣ ಆರ್, ವಸಂತ ಕುಮಾರ, ಮಂಜಪ್ಪ
ಬಿ.ಆರ್, ತಿಪ್ಪೇರುದ್ರಸ್ವಾಮಿ, ಕೃಷ್ಣಮೂರ್ತಿ ಟಿ, ರವಿಕುಮಾರ್ ಬಿ.ವಿ, ಮಂಜುನಾಥ ಈ, ಮಂಜುನಾಥ ಎನ್, ಸೈಯದ್ ಮಹಮದ್ ರಸೂಲ್ ಸಾಬ್, ಪುರುಷೋತ್ತಮ,
ಹನುಮಂತಪ್ಪ ಸಿ, ಚಾಲಕರಾದ ಕರಿಬಸಪ್ಪ, ರಾಘವೇಂದ್ರ ಎಂ, ಬಾಲಾಜಿ, ರವರುಗಳಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿರುತ್ತಾರೆ.
No comments:
Post a Comment