ಪತ್ರಿಕಾ
ಪ್ರಕಟಣೆ
ಮಾಂಗಲ್ಯ
ಸರ ಸುಲಿಗೆ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
ಚಳ್ಳಕೆರೆ
ಟೌನ್ ನಲ್ಲಿ 2016 ಮತ್ತು 2017ನೇ ಸಾಲಿನಲ್ಲಿ ಮಹಿಳೆಯರ ಮಾಂಗಲ್ಯ ಚೈನ್ ಗಳನ್ನು ಕಿತ್ತುಕೊಂಡು ಸುಲಿಗೆ ಮಾಡಿಕೊಂಡು
ಹೋಗಿರುವ ಬಗ್ಗೆ ಚಳ್ಳಕೆರೆ ಠಾಣೆಯಲ್ಲಿ ಮೊ.ನಂ: 316/16, 356/16, 375/16, 400/2016,
238/2017 ಕಲಂ: 392 ಐಪಿಸಿ ಪ್ರಕಾರ ಪ್ರಕರಣಗಳು ದಾಖಲಾಗಿರುತ್ತವೆ. ಸದರಿ ಪ್ರಕರಣಗಳ ಪತ್ತೆಯ ಸಂಬಂಧ
ಮಾನ್ಯ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಅರುಣ್ ರಂಗರಾಜನ್ ಮತ್ತು
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ. ಪರಶುರಾಮ ಕೆ. ಇವರ
ಮಾರ್ಗದರ್ಶನದಲ್ಲಿ ಚಳ್ಳಕೆರೆ ಉಪವಿಭಾಗದ ಪೊಲೀಸ್
ಉಪಾಧೀಕ್ಷಕರಾದ ಶ್ರೀ ಎಸ್. ರೋಷನ್ ಜಮೀರ್ ರವರು, ಪೊಲೀಸ್ ವೃತ್ತ
ನಿರೀಕ್ಷಕರಾದ ²æÃ ತಿಮ್ಮಣ್ಣ ಎನ್. ಇವರ ನೇತೃತ್ವದಲ್ಲಿ ಪಿ.ಎಸ್.ಐ. ರವರುಗಳಾದ ಶ್ರೀ ಸತೀಶ್ ನಾಯ್ಕ. ಶ್ರೀ.ವೆಂಕಟೇಶ್ ಎನ್ ಮತ್ತು ಸಿಬ್ಬಂದಿ ಇವರ ನೇತ್ರತ್ವದಲ್ಲಿ ತಂಡ
ರಚಿಸಿದ್ದು ಸದರಿಯವರು ದಿನಾಂಕ.12.06.2017
ರಂದು ಚಳ್ಳಕೆರೆ ಟೌನ್ ಬಳ್ಳಾರಿ
ರಸ್ತೆ ಹೀರೋ ಶೋರೂಂ ರಸ್ತೆ ಕ್ರಾಸ್ ನಲ್ಲಿ ಕರ್ತವ್ಯದಲ್ಲಿ
ನಿರತರಾಗಿದ್ದಾಗ ಬೆಳಗಿನ ಜಾವ 05-00 ಗಂಟೆ
ಸಮಯದಲ್ಲಿ ಯಾರೊ ಇಬ್ಬರು ಅಸಾಮಿಗಳು ಮೋಟರ್ ಸೈಕಲ್ ನಲ್ಲಿ ಬಂದಾಗ
ತಡೆದು ನಿಲ್ಲಿಸಿ ನೋಡಲಾಗಿ ಸದರಿ ಆಸಾಮಿಗಳು ಚಳ್ಳಕೆರೆ ಠಾಣೆಯ ಎಂ.ಓ.ಬಿ ಅಸಾಮಿಯಾದ ದಾದಾಫೀರ್ @ ಬಡಕ ತಂದೆ ಇಮಾಮ್ ಆಲಿ, 27 ವರ್ಷ, ಮುಸ್ಲಿಂ ಜನಾಂಗ,
ಕೂಲಿ ಕೆಲಸ, ಇಮಾಮ್ ಪುರ ಗ್ರಾಮ ಚಳ್ಳಕೆರೆ ತಾಲ್ಲೂಕು ಮತ್ತು ಶ್ರೀನಿವಾಸ @ ಸೀನಾ ತಂದೆ
ನಾಗರಾಜ, 39 ವರ್ಷ, ಗೊಲ್ಲರ ಜನಾಂಗ, ಕೂಲಿ
ಕೆಲಸ, ಕುರುಡಿಹಳ್ಳಿ ಗ್ರಾಮ ಚಳ್ಳಕೆರೆ ತಾಲ್ಲೂಕು ವಾಸ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಚಳ್ಳಕೆರೆ
ಟೌನ್ ಆಗಿದ್ದು ಸದರಿಯವನನ್ನು ಠಾಣೆಗೆ ಕರೆತಂದು ಕುಲಂಕುಷವಾಗಿ ವಿಚಾರ ಮಾಡಲಾಗಿ ಸದರಿಯವರು ಈಗ್ಗೆ ಸುಮಾರು ಒಂದು ವರ್ಷದಿಂದ ಚಳ್ಳಕೆರೆ ನಗರದ ಮತ್ತು ಹೊರವಲಯದಲ್ಲಿ ಒಟ್ಟು 05 ಕಡೆಗಳಲ್ಲಿ 05 ಜನ ಮಹಿಳೆಯರ ಮಾಂಗಲ್ಯ
ಸರಗಳನ್ನು ಸುಲಿಗೆ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ಸದರಿಯವರನ್ನು ಮೇಲ್ಕಂಡ ಕೇಸುಗಳಲ್ಲಿ ದಸ್ತಗಿರಿ ಮಾಡಿ ಸದರಿಯವರಿಂದ ಮೇಲ್ಕಂಡ ಕೇಸುಗಳಿಗೆ ಸಂಬಂಧಿಸಿದಂತೆ ಒಟ್ಟು 185 ಗ್ರಾಂ
ಬಂಗಾರದ 05 ಮಾಂಗಲ್ಯಸರಗಳು ಇವುಗಳ ಬೆಲೆ ಸುಮಾರು 4,53,000/- (ನಾಲ್ಕು ಲಕ್ಷದ ಐವತ್ತ ಮೂರು ಸಾವಿರ) ರೂಗಳು ಮತ್ತು ಇದಕ್ಕೆ ಸಂಬಂಧಿಸಿದಂತೆ ಹಿರೋ ಹೊಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲ್ ಬೆಲೆ ಸುಮಾರು 40,000/- ರೂ ಎಲ್ಲಾ ಒಟ್ಟು ಮೌಲ್ಯ 4,93,000/- ರೂಗಳಾಗಿರುತ್ತವೆ.
ಈ ಪ್ರಕರಣಗಳಲ್ಲಿ ಆರೋಪಿತರನ್ನು ಪತ್ತೆ ಮಾಡಿ ಮಾಲನ್ನು
ವಶಪಡಿಸಿಕೊಳ್ಳಲು ಶ್ರಮಿಸಿದ ಚಳ್ಳಕೆರೆ
ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್. ರೋಷನ್ ಜಮೀರ್ ರವರು, ಪೊಲೀಸ್
ವೃತ್ತ ನಿರೀಕ್ಷಕರಾದ ²æÃ ತಿಮ್ಮಣ್ಣ ಎನ್. ಇವರ ನೇತೃತ್ವದಲ್ಲಿ ಪಿ.ಎಸ್.ಐ. ರವರುಗಳಾದ ಶ್ರೀ ಸತೀಶ್ ನಾಯ್ಕ. ಶ್ರೀ.ವೆಂಕಟೇಶ್ ಎನ್ ಠಾಣೆಯ ಸಿಬ್ಬಂದಿಯವರಾದ ವಸಂತ ಕುಮಾರ. ಮಂಜುನಾಥ, ತಿಪ್ಪೇರುದ್ರಸ್ವಾಮಿ, ಸೈಯದ್ ಮಹಮದ್ ರಸೂಲ್ ಸಾಬ್, ಕೃಷ್ಣಮೂರ್ತಿ ಟಿ. ತಿರುಕಪ್ಪ ಟಿ, ಚಾಲಕರಾದ ಬಾಲಾಜಿ, ರಾಘವೇಂದ್ರ ರವರುಗಳಿಗೆ ಇಲಾಖೆಯ ಹಿರಿಯ ಅಧಿಕಾರಿಗಳು
ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.
No comments:
Post a Comment